Assignment -8 ವಿಷಯಾಧಾರಿತ ಕನ್ನಡ ರಸಪ್ರಶ್ನೆ

*ರಸಪ್ರಶ್ನೆ ಕಾರ್ಯಕ್ರಮ*
1) ಗಣಿತ ಈ ಪದದಲ್ಲಿರುವ ಅನುನಾಸಿಕ ಅಕ್ಷರ ಯಾವುದು?
ಉತ್ತರ: ಣಿ
2)ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವರ್ಣಗಳೆಷ್ಟು?
ಉತ್ತರ:49 ಅಕ್ಷರಗಳು.
3)'ಊರೂರು ' ಪದ ಬಿಡಿಸಿ ಬರೆದಾಗ.‌
ಉತ್ತರ: ಊರು+ಊರು
4)ಅನುಕೂಲ ಪದದ ವಿರುದ್ದ ಪದ?
ಉತ್ತರ: ಅನನುಕೂಲ
5)'ಅಪ್ಪ' ಇಲ್ಲಿರುವ ಒತ್ತಕ್ಷರದ ವಿಧ?
ಉತ್ತರ:'ಪ್ಪ' ಸಜಾತಿ ಒತ್ತಕ್ಷರ.
6)'ಅಡವಿ' ಪದದ ಸಮಾನಾರ್ಥಕ ಪದ?
ಉತ್ತರ: ಅರಣ್ಯ,ಕಾನನ.
7) ಹುಡುಗ ಪದದ 'ಸ್ತ್ರೀಲಿಂಗ' ರೂಪ?
ಉತ್ತರ: ಹುಡುಗಿ.
8)'ಅದು' ಪದದ ಬಹುವಚನವೇನು?
ಉತ್ತರ: 'ಅವು'
9)ರಾಮನು ಶಾಲೆಗೆ ಹೋದನು? ಈ ವಾಕ್ಯದಲ್ಲಿರುವ ಕ್ರಿಯಾಪದ?
ಉತ್ತರ: ಹೋದನು.
10) 'ಬಂದನು' ಸ್ತ್ರೀಲಿಂಗ ರೂಪ?
ಉತ್ತರ:ಬಂದಳು.
11)ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವಂಜನಗಳೆಷ್ಟು?
ಉತ್ತರ:25
12)ಕನ್ನಡ ವರ್ಣಮಾಲೆಯ ಯೋಗವಾಹಗಳಾವವು?
ಉತ್ತರ: ಅಂ & ಅಃ
13)'ಮೇಲೆ' ಪದದ ವಿರುದ್ಧ ಪದ?
ಉತ್ತರ:ಕೆಳಗೆ
14) 'ಎತ್ತು' ಪದದ ಬಹುವಚನ ಪದ?
ಉತ್ತರ: ಎತ್ತುಗಳು.
15) 'ಅಣ್ಣ' ಪದದ ಬಹುವಚನ ಪದ?
ಉತ್ತರ: 'ಅಣ್ಣಂದಿರು'
16)' ಹಗಲು' ಪದದ ವಿರುದ್ಧ ಪದ?
ಉತ್ತರ: ರಾತ್ರಿ.
17) ಅವನು ಅಕ್ಷರ ವಿಂಗಡಿಸಿ.
ಉತ್ತರ: ಅ+ವ್+ಅ+ನ್+ಉ.
18) 'ಅಸ್ತ್ರ' ಪದದ ಅಕ್ಷರ ವಿಂಗಡಿಸಿದಾಗ./
ಉತ್ತರ:ಅ+ಸ್+ತ್+ರ್+ಅ
19) ವಿದ್ಯಾರ್ಥಿ ಪದದಲಿಂಗ ಬದಲಿಸಿ ಬರೆ.
ಉತ್ತರ: ವಿದ್ಯಾರ್ಥಿನಿ
20) 'ಹೂ' ಸಮನಾರ್ಥಕ ಪದ
ಉತ್ತರ:ಸುಮ ಪುಷ್ಪ.

Comments